
ದಕ್ಷಿಣ ಕನ್ನಡ: ಉಗ್ರ ಸಂಘಟನೆ ಜೈಷ್ ಎ ಮೊಹಮ್ಮದ್ (Jaish e mohammed) ಹೆಸರಲ್ಲಿ ಹಿಂದೂ ಮುಖಂಡನಿಗೆ ಕೊಲೆ ಬೆದರಿಕೆ ಬಂದಿರುವ ಬಗ್ಗೆ ಆರೋಪಿಸಲಾಗಿದೆ. ಹಿಂದೂ ಜಾಗರಣ ವೇದಿಕೆಯ (Hindu Jagaran Vedike) ದಕ್ಷಿಣ ಕನ್ನಡ (Dakshina Kannada) ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಎಂಬುವರಿಗೆ ವಾಟ್ಸ್ಅಪ್ನಲ್ಲಿ ಬೆದರಿಕೆ ಸಂದೇಶ ಬಂದಿದೆ ಎನ್ನಲಾಗಿದೆ.
ಹಲವು ಹಿಂದೂ ಮುಖಂಡರ ಹೆಸರುಗಳನ್ನು ಸಿದ್ದ ಮಾಡಿಕೊಂಡಿದ್ದೇವೆ. ನಿನ್ನ(ನರಸಿಂಹ ಮಾಣಿ) ಹೆಸರು ಕೂಡ ಇದೆ. ನಿನ್ನ ಚಲನವಲನಗಳನ್ನು ನೋಡುತ್ತಿದ್ದೇವೆ. ಸುಹಾಸ್ ಶೆಟ್ಟಿ ಕೂಡ ನಮ್ಮ ಪಟ್ಟಿಯಲ್ಲಿದ್ದ ಆದ್ರೆ ಯಾರೋ ಅವನನ್ನು ಕೊಂದು ಹಾಕಿದ್ದಾರೆ. ನಿನ್ನ ಸ್ನೇಹಿತ ರಂಜಿತ್ನನ್ನು ಕೂಡ ಕೊಲ್ಲುತ್ತೇವೆ. ಮೊದಲು ಆತನ ಕೈ ಕಾಲು ಕತ್ತರಿಸಿ, ನಂತರ ತಲೆ ಕಡಿದು ಮೈನ್ಗೇಟ್ಗೆ ನೇತು ಹಾಕುತ್ತೇವೆ. ನಾವು ಈಗಾಗಲೇ ದೆಹಲಿ ತಲುಪಿಯಾಗಿದೆ ಎಂದು ಸಂದೇಶ ಬಂದಿರುವುದಾಗಿ ಆರೋಪಿಸಲಾಗಿದೆ.
ನಿನ್ನನ್ನು (ನರಸಿಂಹ ಮಾಣಿ) ಹೇಗೆ ಕೊಲ್ಲುತ್ತೇವೆ ಎಂದು ಅಲ್ಲಾನಿಗೂ ಗೊತ್ತಿಲ್ಲ. ಮುಸ್ಲಿಮರಿಗೆ ತೊಂದರೆ ಕೊಡುವುದನ್ನು ಬಿಟ್ಟು ನಿನ್ನ ಬಗ್ಗೆ ಯೋಚನೆ ಮಾಡು. ನಿನ್ನ ಕಾಪಾಡಲು ನಿಮ್ಮ ಪಾರ್ಟಿ ಅಥವಾ ಯಾವುದೇ ಮುಖಂಡರಿಂದ ಸಾಧ್ಯವಿಲ್ಲ. ನಿನ್ನ ಜೊತೆ ನಿಮ್ಮ ಮುಖಂಡರನ್ನು ಕೂಡ ಮುಗಿಸಲಾಗುವುದು ಎಂದು ಸಂದೇಶದಲ್ಲಿ ಹೇಳಲಾಗಿದೆ.