
ಭಾರತ ನಡೆಸಿದ ಆಪರೇಷನ್ ಸಿಂಧೂರದಿ ಬಗ್ಗೆ ಪಾಕ್ ಒಪ್ಪಿಕೊಂಡು ಮತ್ತಷ್ಟು ಸತ್ಯಗಳನ್ನು ಹೊರಹಾಕಿದೆ. ಪಾಕಿಸ್ತಾನದ ರಾವಲ್ಪಿಂಡಿ ವಿಮಾನ ನಿಲ್ದಾಣದ ಮೇಲೆ ಬ್ರಹ್ಮೋಸ್ ಕ್ಷಿಪಣಿ ದಾಳಿಯಾಗಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ.
ಅಜೆರ್ಬೈಜಾನ್ನಲ್ಲಿ ನಡೆದ ತ್ರಿಪಕ್ಷೀಯ ಶೃಂಗಸಭೆಯಲ್ಲಿ ಮಾತನಾಡಿದ ಪಾಕ್ ಪ್ರಧಾನಿ ಷರೀಫ್, ಮೇ10ಕ್ಕೆ ಬೆಳಗಿನ ಪ್ರಾರ್ಥನೆ ಬಳಿಕ ಭಾರತದ ಮೇಲೆ ದಾಳಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಯಿತು. ಆದ್ರೆ ನಾವು ದಾಳಿ ಮಾಡುವ ಮೊದಲೇ ಭಾರತ ಬ್ರಹ್ಮೋಸ್ ಕ್ಷಿಪಣಿ ದಾಳಿ ನಡೆಸಿದೆ ಎಂದರು.
ಬ್ರಹ್ಮೋಸ್ ಕ್ಷಿಪಣಿ ದಾಳಿಯಿಂದ ಪಾಕ್ನ ಹಲವು ಮಿಲಿಟರಿ ಕೇಂದ್ರಗಳು ಹಾಗೂ ವಾಯುನೆಲೆಗಳ ಮೇಲೆ ನಾಶವಾಗಿದೆ. ರಾವಲ್ಪಿಂಡಿಯ ನೂರ್ ಖಾನ್ ಮತ್ತು ಮುರಿಯ್ನ ವಾಯುನೆಲೆಗಳು ಧ್ವಂಸಗೊಂಡಿದೆ. ಇದರಿಂದ ನಮ್ಮ ಯೋಜಿತ ದಾಳಿ ತಲೆಕೆಳಗಾಯಿತು ಎಂದು ಪಾಕ್ ಪ್ರಧಾನಿ ಹೇಳಿದ್ದಾರೆ.