
ಮಧ್ಯಪ್ರದೇಶ: ಎರಡು ವಾರಗಳಲ್ಲಿ ನಿಗೂಢ ಪ್ರಾಣಿಯೊಂದು ದಾಳಿ ಮಾಡಿ 6 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ನಿಗೂಢ ಪ್ರಾಣಿ ದಾಳಿ ನಡೆಸುತ್ತಿದ್ದೆ ಅಂತ ವರದಿಯಾಗಿದೆ. ಸ್ಥಳೀಯರ ಮಾಹಿತಿ ಪ್ರಕಾರ, 6 ಮಂದಿಗೂ ರೇಬಿಸ್ ಇಂಜೆಕ್ಷನ್ ನೀಡಲಾಗಿತ್ತು.
ಲಿಂಬೈ ಗ್ರಾಮದಲ್ಲಿ ಮಲಗಿದ್ದ ವೇಳೆ ನಿಗೂಢ ಪ್ರಾಣಿ ದಾಳಿ ಮಾಡಿದೆ ಎನ್ನಲಾಗಿದೆ. ಗ್ರಾಮದ 17 ಮಂದಿ ಮಲಗಿದ್ದರು, ಜನರು ಮಲಗಿದ್ದಾಗ ಪ್ರಾಣಿ ದಾಳಿ ಮಾಡಿದೆ. ಪ್ರಾಣಿ ಯಾವುದೆಂದು ಗುರುತಿಸಲು ಸಾಧ್ಯವಾಗಲಿಲ್ಲ. ರಾತ್ರಿ ಅಷ್ಟೇ ಅಲ್ಲದೇ ಬೆಳಗಿನ ಜಾವದ ವೇಳೆ ಕೂಡ ದಾಳಿ ಮಾಡುತ್ತಿದ್ದೆ ನಿಗೂಢ ಪ್ರಾಣಿ ಬಿಗಳಲಿಲ್ಲ, ನೆರಳಿನಂತೆ ಬಂದು ಕಚ್ಚಿ ಕಣ್ಮರೆಯಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದರು.
17 ಮಂದಿಗೆ ಬರ್ವಾನಿ ಮತ್ತು ಇಂದೋರ್‌ನ ವೈದ್ಯಕೀಯ ಕೇಂದ್ರಗಳಲ್ಲಿ ರೇಬೀಸ್ ವಿರೋಧಿ ಲಸಿಕೆ ನೀಡಲಾಯಿತು. ಆದರೆ ಮೇ 23 ಮತ್ತು ಜೂನ್ 2 ರ ನಡುವೆ, ಅವರಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ . ವೈದ್ಯರು ಕೂಡ ಈ ರೀತಿ ಕಚ್ಚಿರುವ ಗುರುತು ನೋಡಿಲ್ಲ ಎಂದಿದ್ದಾರೆ.ಮೃತರ ಮೆದುಳಿನ ಅಂಗಾಂಶ, ಗಂಟಲಿನ ಬಯಾಪ್ಸಿಯನ್ನು ವಿವರವಾದ ವಿಶ್ಲೇಷಣೆಗಾಗಿ ದೆಹಲಿಗೆ ಕಳುಹಿಸಲಾಗಿದೆ. ಅವರೆಲ್ಲರ ಸಾವಿಗೆ ರೇಬಿಸ್ ಇಂಜೆಕ್ಷನ್ ಕಾರಣವೇ ಅಥವಾ ಆ ಪ್ರಾಣಿ ಕಚ್ಚಿದ್ದು ಕಾರಣವೇ ಎಂಬುದು ವರದಿ ಬಂದ ನಂತರ ತಿಳಿದು ಬರಲಿದೆ.
ಲಿಂಬೈ ಗ್ರಾಮದಲ್ಲಿ ಮೂರು ಸಾಕು ಪ್ರಾಣಿಗಳು ನಿಗೂಢ ಸಂದರ್ಭಗಳಲ್ಲಿ ಸಾವನ್ನಪ್ಪಿವೆ,ಅರಣ್ಯ ಇಲಾಖೆಯಿಂದ ಸಂತ್ರಸ್ತ ಕುಟುಂಬಗಳಿಗೆ ತಲಾ 8 ಲಕ್ಷ ರೂ.ಗಳ ಪರಿಹಾರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.