
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಕಪ್ ಗೆದ್ದ ಸಂಭ್ರಮಾಚರಣೆಯಲ್ಲಿದ್ದ ಅಭಿಮಾನಿ ಮೇಲೆ ಚಾಕು ಇರಿತವಾದ ಘಟನೆ ಬೆಂಗಳೂರಿನ ಜಾಲಹಳ್ಳಿ ಕ್ರಾಸ್ (Jalahalli Cross) ಬಳಿ ನಡೆದಿದೆ.
ನಿನ್ನೆ ಆರ್ಸಿಬಿ ಫೈನಲ್ಸ್ನಲ್ಲಿ ಗೆದ್ದ ಸಂಭ್ರಮದಲ್ಲಿದ್ದ ಯುವಕ ಬಾರ್ಗೆ ತೆರಳುವ ವೇಳೆ ದುಷ್ಕರ್ಮಿಗಳು ಚಾಕುವಿನಿಂದ ಯುವಕನ ಕುತ್ತಿಗೆ ಭಾಗಕ್ಕೆ ಇರಿದು ತಕ್ಷಣವೇ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಅದೃಷ್ಟವಶಾತ್ ಯುವಕ ಕೂದಲೆಳೆ ಅಂತರದಿಂದ ಪಾರಾಗಿದ್ದು, ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಈ ಘಟನೆ ರಾತ್ರಿ 12 ಗಂಟೆಗೆ ನಡೆದಿದೆ ಅಂತ ಹೇಳಲಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೀಣ್ಯ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.