
ಬೆಂಗಳೂರು: ಒಳ ಮೀಸಲಾತಿ ಗಣತಿ ಮಾಡುವ ಸರ್ಕಾರಿ ಅಧಿಕಾರಿಗಳಿಂದಲೇ ಜಾತಿ ನಿಂದನೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ದೊಡ್ಡ ನಕ್ಕುಂದಿ ಆರ್‌ಐ (Revenue Inspector) ರಾಜೇಶ್ ವಿರುದ್ಧ ಕಂದಾಯ ಇಲಾಖೆಯ (Revenue Department) ಹಿರಿಯ ಅಧಿಕಾರಿಗಳ ಬಳಿ ದೂರು ಸಲ್ಲಿಸಲಾಗಿದೆ.
ಆರ್‌ಐ ರಾಜೇಶ್ (Revenue Inspector Rajesh) ದೊಡ್ಡ ನೆಕ್ಕುಂದಿ ಭಾಗದಲ್ಲಿ ಒಳ ಮೀಸಲಾತಿ ಬಗ್ಗೆ ಗಣತಿ ಮಾಡುತ್ತಿದ್ದ ವೇಳೆ ದಲಿತರನ್ನು ನಿಂದಿಸುತ್ತಾ ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆ. ಅಲ್ಲೇ ಗಣತಿ ಮಾಡುವ ಸಮಯದಲ್ಲಿ ಹಿಯಾಳಿಸುತ್ತಾ ಬೇಕಾಬಿಟ್ಟಿ ಗಣತಿ ಮಾಡುತ್ತಿದ್ದಾರೆ ಎಂದು ಸಮತಾ ಸೈನಿಕ ದಳದ ರಾಜ್ಯ ಯುವ ಘಟದ ಪ್ರಧಾನ ಕಾರ್ಯದರ್ಶಿ ದಲಿತ ಚಳುವಳಿ ನಾಗೇಶ್ ದೂರು ಸಲ್ಲಿಸಿದ್ದಾರೆ.

ಆರ್‌ಐ ರಾಜೇಶ್
ಸರ್ಕಾರಿ ಅಧಿಕಾರಿ ರಾಜೇಶ್ ವಿರುದ್ಧ ಕೆ.ಆರ್ ಪುರದ ಆರ್.ಓ ಬಸವರಾಜ್ ಮಗ್ಗಿಗೆ ಈ ಬಗ್ಗೆ ದೂರು ಸಲ್ಲಿಸಲಾಗಿದೆ. ಸಮಾಜದ ಏಳಿಗೆ ನಡೆಯುತ್ತಿರುವ ಇಂತಹ ಗಣತಿಯಲ್ಲಿ ಇಂತಹ ಜಾತಿವಾದಿ ಅಧಿಕಾರಿಗಳು ಇರುವುದರಿಂದ ಈ ಗಣತಿಗೆ ಕಪ್ಪು ಚುಕ್ಕಿಯಾಗಿದೆ. ಹೀಗಾಗಿ ಯಾವುದೇ ಮುಲಾಜಿಲ್ಲದೆ ರಾಜೇಶ್ ರನ್ನ ಹಿರಿಯ ಅಧಿಕಾರಿಗಳು ಈ ಕೂಡಲೆ ಆರ್‌ಐ ರಾಜೇಶ್‌ರನ್ನು ವರ್ಗಾವಣೆ ಮಾಡಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
ದೂರು ನೀಡಿದ ಬಳಿಕವೂ ಹಿರಿಯ ಅಧಿಕಾರಿಗಳು ವರ್ಗಾವಣೆ ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ದಲಿತ ಸಂಘಟನೆಗಳು ಗ್ರೇಟರ್ ಬೆಂಗಳೂರು ಕಚೇರಿ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.