
ಚಂಡೀಘಡ: ಪಂಜಾಬ್ ಕಿಂಗ್ಸ್ನನ್ನು (Punjab Kings) ಮಣಿಸುವ ಮೂಲಕ ಆರ್ಸಿಬಿ (Royal Challengers Bengaluru) ಫೈನಲ್ಸ್ಗೆ ತಲುಪಿದೆ. ಐಪಿಎಲ್ 2025 ರ ಮೊದಲ ಅರ್ಹತಾ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕೇವಲ 14.1 ಓವರ್ಗೆ 101 ರನ್ಗೆ ಆಲೌಟ್ ಆಗಿತ್ತು. ಅಲ್ಪ ಮೊತ್ತದ ರನ್ ಬೆನ್ನತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 2 ವಿಕೆಟ್ ನಷ್ಟಕ್ಕೆ 106 ರನ್ ಮೂಲಕ ಪಂಜಾಬ್ ಮಣಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಮೊದಲ ವಿಕೆಟ್ ಕಳೆದುಕೊಂಡಿತ್ತು. ಕೈಲ್ ಜೇಮಿಸನ್ ನಾಲ್ಕನೇ ಓವರನಲ್ಲಿ ವಿರಾಟ್ ಕೊಹ್ಲಿ (12) ಔಟಾದ್ರು. ಮೊದಲ ಪಂದ್ಯ ಆಡುತ್ತಿದ್ದ ಮುಶೀರ್ ಖಾನ್, ಮಾಯಾಂಕ್ ಅಗರ್ವಾಲ್ (19) ಅವರ ವಿಕೆಟ್ ಪಡೆದರು. ನಾಯಕ ರಜತ್ ಪಟಿದಾರ್ 10 ನೇ ಓವರ್ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಂಡಕ್ಕೆ ಸ್ಮರಣೀಯ 8 ವಿಕೆಟ್ಗಳ ಗೆಲುವು ತಂದುಕೊಟ್ಟರು.