
ಚಂಡೀಘಡ: ಬ್ಯಾಟರ್ಗಳ ಕಳಪೆ ಪ್ರದರ್ಶನದಿಂದ ಪಂಜಾಬ್ ಕಿಂಗ್ಸ್ (Punjab Kings) ಕೇವಲ 14.1 ಓವರ್ಗಳಲ್ಲೇ 101 ರನ್ಗಳಿಗೆ ಆಲೌಟ್ ಆಗಿದ್ದು, ಆರ್ಸಿಬಿ (Royal Challengers Bengaluru)ಗೆ 102 ರನ್ ಗುರಿ ನೀಡಿದೆ.
ಚಂಡೀಘಡದ ಮಲ್ಲನ್ಪುರ ಕ್ರಿಕೆಟ್ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೀಲ್ಡಿಂಗ್ ಆಯ್ದುಕೊಂಡು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಂಜಾಬ್ಗೆ ಬಿಟ್ಟುಕೊಟ್ಟಿತು. ಆದ್ರೆ ಮೊದಲ ಕ್ರಮಾಂಕದ ಬ್ಯಾಟ್ಸ್ಮೆನ್ಗಳು ಆರ್ಸಿಬಿ ಬೌಲ್ಲಿಂಗ್ ದಾಳಿಗೆ ಪಂಜಾಬ್ ಕಿಂಗ್ಸ್ಗೆ ಪತನವಾಗಿದೆ.
ಆರಂಭದಲ್ಲೇ ಉತ್ತಮ ರನ್ ನಿರೀಕ್ಷೆಯಲ್ಲಿದ್ದ ಪಂಜಾಬ್ ಕಿಂಗ್ಸ್, 1.2 ಓವರ್ಗಳಲ್ಲಿ 9 ರನ್ಗೆ ಮೊದಲನೇ ವಿಕೆಟ್ ಕಳೆದುಕೊಂಡಿತ್ತು. ಮೊದಲನೇ ವಿಕೆಟ್ ಕಳೆದುಕೊಂಡ ಪಂಜಾಬ್, ನಂತರ ಪೆವಿಲಿಯನ್ ಪೆರೇಡ್ ಮಾಡಲು ಆರಂಭಿಸಿತು. ಕೊನೆಗೆ ಕೇವಲ 14.1 ಓವರ್ಗಳಲ್ಲಿ 101ಗಳಿಗೆ ಆಲೌಟ್ ಆಗಿದೆ.